It is really a very good initiative.Here is a recent example.I congratulate all those who are involved in this project.
Classics never die.Kumaravyasa mahabharatha has come all the way from manuscripts to print media to all India radio to Television to folk forms to electronic media.Thats why I say classics will never die.
ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಾಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ
ಕರ್ಣಾಟ ಭಾರತ ಕಥಾಮಂಜರಿ
ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ. ಈ ಪ್ರಯತ್ನದಲ್ಲಿ ನೀವೂ ಕೈಗೂಡಿಸಬಹುದು. ವಿವರಗಳಿಗೆ ಪೀಠಿಕೆ ನೋಡಿ. ಓದುಗರಿಗೆ ಸೂಚನೆ: ಕೃತಿಯ ವಿವಿಧ ಭಾಗಗಳನ್ನು ವಿವಿಧ ಲೇಖಕರು ಬೇರೆಬೇರೆ ಸಮಯದಲ್ಲಿ ಪ್ರಕಟಿಸುವುದರಿಂದ, ಸಧ್ಯಕ್ಕೆ ಇಡೀ ಕೃತಿ ಅನುಕ್ರಮದಲ್ಲಿ ಲಭ್ಯವಿರುವುದಿಲ್ಲ. ಆದರೆ ಶೀರ್ಷಿಕೆಗಳನ್ನು ಕ್ರಮವಾಗಿ ಅನುಗೊಳಿಸಲಾಗಿದೆ. ಓದುಗರು ತಮಗೆ ಬೇಕಾದ ಪರ್ವವೊಂದನ್ನು ಕ್ಲಿಕ್ಕಿಸಿದರೆ ಅದರಡಿಯಲ್ಲಿ ಪ್ರಕಟಿಸಿರುವ ಎಲ್ಲಾ ಸಂಧಿಗಳನ್ನು ಕ್ರಮವಾಗಿ ಓದಿಕೊಳ್ಳಬಹುದು. http://gaduginabharata.blogspot.com/