April 20, 2014

ಮಾಂತ್ರಿಕ ವಾಸ್ತವಿಕತೆಯ ಪಿತಾಮಹ ಗಾರ್ಸಿಯಾ ಮಾರ್ಕ್ವೆಜ್ ನಿಧನಕ್ಕೆ ಕಂಬನಿಯ ಮಹಾಪೂರ

ಮಾಂತ್ರಿಕ ವಾಸ್ತವಿಕತೆಯಮಾಂತ್ರಿಕ ವಾಸ್ತವಿಕತೆಯ ಮೂಲಕ ಪ್ರೇಮ, ಕುಟುಂಬ ಮತ್ತು ಲ್ಯಾಟಿನ್ ಅಮೆರಿಕಾದ ಸರ್ವಾಧಿಕಾರಿತ್ವದ ಬಗ್ಗೆ ಮಹಾನ್ ಕೃತಿಗಳನ್ನು ರಚಿಸಿದ್ದ ಕೊಲಂಬಿಯಾದ ನೊಬೆಲ್‌ ಪ್ರಶಸ್ತಿ ವಿಜೇತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನಿಧನಕ್ಕೆ ವಿಶ್ವದಾದ್ಯಂತ
ಹರಿದು ಬಂದಿದೆ. 87ನೇ ವಯಸ್ಸಿನಲ್ಲಿ ನಿಧನರಾಗಿರುವ ಮಾರ್ಕ್ವೆಜ್ ಅವರನ್ನು ಅವರ ಆಪ್ತರು ‘ಗಾಬೊ‘ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ‘ಒನ್‌ ಹಂಡ್ರೆಡ್‌ ಇಯರ್ಸ್ ಆಫ್‌ ಸಾಲಿಟ್ಯೂಡ್‌’ , ‘ಲವ್‌ ಇನ್‌ ದ ಟೈಂ ಆಫ್‌ ಕಾಲೆರ’ ದಂಥ ಜಗತ್ತಿನ ಅತಿ ಜನಪ್ರಿಯ ಕೃತಿಗಳನ್ನು ರಚಿಸಿದ್ದ ಲ್ಯಾಟಿನ್ ಅಮೆರಿಕಾದ ಈ ಲೇಖಕ ತನ್ನ ಖಂಡದ ಪ್ರಕ್ಷುಬ್ಧತೆಗೆ ಸಾಕ್ಷಿಯಾದ ಸಾಹಿತ್ಯ ಆಂದೋಲನಕ್ಕೆ ಸಾಕ್ಷಿಯಾಗಿದ್ದ. ಗೆಳೆಯರು ತನ್ನನ್ನು ಇಷ್ಟಪಡಲಿ ಎಂದು ಇವನು ಬರೆಯುತ್ತಾನೆ ಎಂದು ಪತ್ರಕರ್ತ ಮಾರ್ಕ್ವೆಜ್‌ನ್ನು ಸಹ ನೋಬೆಲ್‌ ಪುರಸ್ಕೃತ ಮಾರಿಯೋ ವರ್ಗಾಸ್‌ ಲ್ಲೋಸಾ ಒಮ್ಮೆ ತಮಾಷೆ ಮಾಡಿದ್ದ. ಮಾರ್ಕ್ವೆಜ್‌ ಕ್ಯೂಬಾದ ನಾಯಕ ಫಿಡಲ್‌ ಕ್ಯಾಸ್ಟ್ರೋವಿನ ಮಿತ್ರನಾಗಿದ್ದ. ‘ಕೊಲಂಬಿಯಾದ ಈ ಸರ್ವ ಶ್ರೇಷ್ಠನ ಸಾವಿನಿಂದ ಒಂದು ಸಾವಿರ ವರ್ಷಗಳ ಒಂಟಿತನ ಮತ್ತು ಬೇಸರ ಉಂಟಾಗಿದೆ‘ ಎಂದು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುಯಲ್‌ ಸಾಂಟೋಸ್‌ ಟ್ವೀಟ್‌ ಮಾಡಿದ್ದಾರೆ. ಕೊಲಂಬಿಯಾದ ಅಧ್ಯಕ್ಷರಾದ ಅವರು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ‘ ಜಗತ್ತು ತನ್ನ ಅತಿ ದೊಡ್ಡ ದಾರ್ಶನಿಕ ಲೇಖಕನ್ನು ಕಳೆದುಕೊಂಡಿದೆ‘ ಎಂದಿದ್ದಾರೆ. ಫ್ರೆಂಚ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲ್ಲಾಂಡ್, ಈ ‘ ಸಾಹಿತ್ಯಕ ದೈತ್ಯ’ನಿಗೆ ಸಂಬಂಧಿಸಿದ ತಮ್ಮ ಶೋಕ ಸಂದೇಶದಲ್ಲಿ ‘ಅವರು ನಮ್ಮ ಕಾಲದ ದಕ್ಷಿಣ ಅಮೆರಿಕಾದ ಬಹುದೊಡ್ಡ ಬುದ್ಧಿಜೀವಿಯಾಗಿದ್ದರು’ ಎಂದು ಬಣ್ಣಿಸಿದ್ದಾರೆ. ‘ಲ್ಯಾಟಿನ್‌ ಅಮೆರಿಕಾದ ದನಿಯಾಗಿದ್ದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇಡೀ ನಮ್ಮ ವಿಶ್ವಕ್ಕೇ ದನಿಯಾದರು. ಅವರ ಪ್ರತಿಭೆ ನಮ್ಮನ್ನು ಶ್ರೀಮಂತಗೊಳಿಸಿತ್ತು ಅವರ ಸಾವು ನಮ್ಮನ್ನು ಬಡವರನ್ನಾಗಿ ಮಾಡಿದೆ ’ ಎಂದು ಯುರೋಪಿಯನ್‌ ಕಮಿಷನ್ನಿನ ಅಧ್ಯಕ್ಷ ಜೋಸ್‌ ಮ್ಯಾನುಅಲ್‌ ಬರ್ರೋಸೊ ತಿಳಿಸಿದ್ದಾರೆ. ಮಾರ್ಚ್‌ 31ರಂದು ನ್ಯುಮೋನಿಯಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಮಾರ್ಕ್ವೆಜ್ ಅವರನ್ನು ಒಂದು ವಾರದ ಬಳಿಕ ಬಿಡುಗಡೆ ಮಾಡಲಾಗಿದ್ದು ಅವರು ಮೆಕ್ಸಿಕೊ ಸಿಟಿಯಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ನಿಧನದ ಸರಿಯಾದ ಕಾರಣ ತಿಳಿದುಬಂದಿಲ್ಲ. ಮಾರ್ಕ್ವೆಜ್ ಅವರು ಕೊಲಂಬಿಯಾದ ಕೆರಿಬಿಯನ್‌ ಕರಾವಳಿಯ ಅರಕಾಟಕ ಹಳ್ಳಿಯಲ್ಲಿ ತಂತಿ ನಿರ್ವಾಹಕನೊಬ್ಬನ ಮಗನಾಗಿ 1927ರ ಮಾರ್ಚ್ 6ರಂದು ಜನಿಸಿದರು. ಸ್ಪೇನಿನ ವಲಸೆಗಾರರು, ಸ್ಥಳೀಯ ನಿವಾಸಿಗಳು ಮತ್ತು ಕಪ್ಪು ಗುಲಾಮರುಗಳಿರುವ ಉಷ್ಣವಲಯದ ಸಂಸ್ಕೃತಿಯಲ್ಲಿ ಅಜ್ಜ–ಅಜ್ಜಿ ಮತ್ತು ಚಿಕ್ಕಮ್ಮನ ಆರೈಕೆಯಲ್ಲಿ ಮಾರ್ಕ್ವೆಜ್ ಬೆಳೆದರು. ಅವರ ತಾತ ಸೈನ್ಯದ ನಿವೃತ್ತ ಅಧಿಕಾರಿಯಾಗಿದ್ದರು. ಅವರ ತಾಯ್ನಾಡಿನ ಅದ್ಭುತ ಕತೆಗಳು ಹೇರಳವಾಗಿ ಬರೆಯಲು ಅವರಿಗೆ ಸ್ಫೂರ್ತಿ ನೀಡಿದವು. ಅವರ ಮೇರುಕೃತಿ ‘ಒನ್‌ ಹಂಡ್ರೆಡ್‌ ಇಯರ್ಸ್ ಆಫ್‌ ಸಾಲಿಟ್ಯೂಡ್‌’ ಜಗತ್ತಿನ 35 ಭಾಷೆಗಳಿಗೆ ಅನುವಾದವಾಗಿದ್ದು 3 ಕೋಟಿಗೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ.

No comments: