ಆನಂದ ಝಂಜರವಾಡ ಬದುಕಿನ ಬೆಂಕಿಯಲ್ಲಿ ಅರಳಿದ ಹೂವು.ಬಡತನ, ವೃತ್ತಿ ಜೀವನದ ಹೋರಾಟದ ನಡುವೆ ಕಾವ್ಯದ ರಚನೆ ಮತ್ತು ಮೀಮಾಂಸೆಯಲ್ಲಿ ತೊಡಗಿದವರು.ಕಾವ್ಯದ ಮೂಲ ಆಚಾರ‍್ಯ ಮಧ್ವರ ಸಿದ್ಧಾಂತದ ಭದ್ರ ಬುನಾದಿಯ ಮೇಲೆ ನಿಂತಿದೆ.ಕನ್ನಡ,ಸಂಸ್ಕೃತ,ಮರಾಠಿ ಕಾವ್ಯ ಧಾರೆಗಳಲ್ಲಿ ಮಿಂದ ಆನಂದರು ಜ್ಣಾನೇಶ್ವರ, ಪುರಂದರಾದಿ ದಾಸವರೇಣ್ಯರ ಭಕ್ತಿಯ ಬೇಗೆ ಮತ್ತು ಅಸ್ತಿತ್ವವಾದಿಗಳ ಅಂದಿನಂದಿನ ದಂದುಗದ ಉರಿಯ ನಡುವೆ ಮಾಗುತ್ತ ಕಾವ್ಯ ಮಾಡಿದವರು.ಹಿಂದುಸ್ತಾನಿ ಸಂಗೀತದ ಮಹಾ ರಸಿಕರಾದ ಇವರು ಕಾವ್ಯ ಭಾಷೆಯಿಂದ ಸಂಗೀತದ ಭಾಷೆಯ ಕಡೆಗೆ ಸರಾಗವಾಗಿ ಸಂಚರಿಸಬಲ್ಲವರು.ರಂ.ಶ.ಲೊಕಾಪುರ ಅವರ ಅನುವಾದ ಕುರಿತು ಇವರು ಎತ್ತಿದ ಪ್ರಶ್ನೆಗಳು ಮುಂದೆ ಕೀರ್ತಿನಾಥ ಕುರ್ತಕೋಟಿ ಅವರು”ಅಧ್ಯಯನ ಮತ್ತು ಪಾರಾಯಣ’ದಂಥ ಜೀವಂತ ಕೃತಿ ರಚನೆಗೆ ಕಾರಣವಾಯಿತು.ಹಲವಾರು ಪ್ರಸಿದ್ದ ವೇದಿಕೆಗಳಲ್ಲಿ ಕಾವ್ಯವಾಚನ ಮತ್ತು ಕವಿ ಗೊಟ್ಟಿಗಳ ತಲೆಮಣಿಯಾಗಿದ್ದಾರೆ.
೧.ಖನನೋದ್ಯಮ
೨.ದಿಂಡಿ ಮತ್ತು ದಾಂಡಿ
೩.ಅಧಿಕ ಮತ್ತು ತರಾನ (ಗಂಡ ಭೇರುಂಡ) ಇವರ ಕೆಲವು ಕವನ ಸಂಕಲನಗಳು.
No comments:
Post a Comment